ಕೋಟೆಗಳು ಒಂದು ಕಾಲದ ಅಧಿಕಾರ ಕೇಂದ್ರಗಳು .ಮೇಲ್ನೋಟಕ್ಕೆ ಆ ಕಾಲದ ರಾಜರುಗಳ ಸಾಮರ್ಥ್ಯ , ದರ್ಪ-ಅಹಂಕಾರದ ಸಂಕೇತಗಳಂತೆ ಕಂಡರೂ ವಾಸ್ತವವಾಗಿ ಅವು ಆ ರಾಜರ ಅಭದ್ರತೆಯ ಪ್ರತೀಕಗಳು. ಬಹಳ ವರ್ಷಗಳ ಕಾಲ ಹೊಸಜಗತ್ತಿಗೆ ಗಮನ ಸೆಳೆಯದೆ ಅನಾಥವಾಗಿದ್ದ ಕೋಟೆಯೊಂದು ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ಅಲ್ಲಿ ಇದೆ. ಅದೇ MIRJAN FORT .ಈ ಕೋಟೆ ರಾಷ್ಟೀಯ ಹೆದ್ದಾರಿಯಿಂದ ಸುಮಾರು ೦.೫ ಕೀಲೊಮೀಟರ್ ದೂರದಲ್ಲಿದೆ .
![](https://blogger.googleusercontent.com/img/b/R29vZ2xl/AVvXsEi0NOEx7AQ49utYngmgS6hT5lZ9vPtxC6_FOIhtysnn2oEZhaNJf1tsPVR5-OPCifkGoUkAz33VRYgkYZS3wWUwjH7e_xzX71uVH5SJsPk4D6pKrluTthhJYogL9Sk-PVkL1V0HUSKMaejZ/s320/IMG-20170512-WA0000.jpg)
ಇಲ್ಲಿಯ ಗ್ರಾಮಸ್ಥರು ಈ ಕೋಟೆಯನ್ನು ಸರ್ಪಮಲ್ಲಿಕನ ಕೋಟೆ ಎಂದು ಕರೆಯುತ್ತಾರೆ, ಅವರ ಪ್ರಕಾರ ಮಲ್ಲಿಕನೆಂಬ ವ್ಯಕ್ತಿ ಆಚ್ವೆಯ (ಅಂಕೋಲಾ ತಾಲೂಕಿನ ಚಿಕ್ಕ ಹಳ್ಳಿ ) ಹೆಬ್ಬಾರರ ಮನೆಯಲ್ಲಿ ಕೂಲಿಮಾಡಿಕೊಂಡಿದ್ದ . ಒಂದು ದಿನ ದನಕಾಯಲು ಹೋದಾಗ ಉರಿಬಿಸಿಲಿನಲ್ಲಿ ಗಾಢ ನಿದ್ರೆಗೆ ತಲುಪಿದ್ದ . ಏಷ್ಟು ಸಮಯವಾದರೂ ಇವನು ಬರದ ಕಾರಣ ಹೆಬ್ಬಾರರು ಅವನ್ನನು ಹುಡುಕಿಕೊಂಡು ಹೋಗುವರು ಅಲ್ಲಿ ಸರ್ಪ ತನ್ನ ಹೆಡೆಯನ್ನು ಬಿಚ್ಚಿ ಮಲ್ಲಿಕನಿಗೆ ನೆರಳನ್ನು ನೀಡುವ ದ್ರಶ್ಯ ಕಂಡು ಬರುತ್ತದೆ ನಂತರ ಅವನನ್ನು ಕರೆದುಕೊಂಡು ಹೋಗಿ ಮಂಗಲ ಸ್ನಾನ ಮಾಡಿಸಿ ನೀನು ರಾಜನಾಗುವೆ ಎಂದು ಹೇಳುತ್ತಾರೆ . ಹೀಗಾಗಿ ಮಲ್ಲಿಕ ಮುಂದೊಂದುದಿನ ರಾಜನಾಗಿ ಮಿರ್ಜಾನ್ ಕೋಟೆಯನ್ನು ಕಟ್ಟಿದನೆಂಬದು ಇಲ್ಲಿಯ ಜನರ ನಂಬಿಕೆ .
![](https://blogger.googleusercontent.com/img/b/R29vZ2xl/AVvXsEhm7QjhSOk3icNP-_dk4305C9We1-briA9pn4OnsiaESzGc2w2l2tEgx50md_I3ceO03GxZJCLAdb_q5FTHTeKvVfyFEBWWoRaQmFs4lcD9kQ3KEu6iYJpsXqCxKIDIeRrvEbhg1TsNpsuK/s320/Screenshot_20170524-194006%257E2.png)
ಪೌರಾಣಿಕ ಕಾಲದ ಅಧ್ಯಯನದ ಪ್ರಕಾರ ಮಿರ್ಜಾನ್ ಕೋಟೆಯನ್ನು ನವಾಯತ್ ಸುಲ್ತಾನರು (೧೨೦೦) ಕಟ್ಟಿದ್ದರು ಎನ್ನಲಾಗಿದೆ. ನಂತರ ಕೋಟೆಯು ಸುಮಾರು ವರ್ಷಗಳ ಕಾಲ ವಿಜಯನಗರರ ಆಳ್ವಿಕೆಯಲ್ಲಿತ್ತು . ಸುಮಾರು ೫೪ ವರ್ಷಗಳ ಕಾಲ ಮಿರ್ಜಾನ್ ಕೋಟೆ ಗೇರುಸೊಪ್ಪೆಯ( ಶರಾವತಿ ನದಿಯ ದಂಡೆಯ ಮೇಲಿರುವ ಸಣ್ಣ ಪಟ್ಟಣ ) ಸಂಗೀಪುರದ ರಾಣಿ ಚೆನ್ನಭೈರಾದೇವಿಯ ಆಡಳಿತ ವ್ಯಾಪ್ತಿಗೆ ಸೇರಿತ್ತು. ಆಕೆಯ ರಾಜ್ಯವು ಕರಿಮೆಣಸಿಗೆ ಏಷ್ಟು ಪ್ರಸಿದ್ಧವಾಗಿತ್ತೆಂದರೆ ಆಕೆಯನ್ನು ಪೋರ್ಚುಗೀಸರು ಕರಿಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು .
೧೬೦೦ರ ಶತಕದಲ್ಲಿ ವಿಜಯನಗರ ಸಾಮ್ರಾಜ್ಯವು ಕ್ಷೀಣವಾದಾಗ ಬಿಜಾಪುರದ ಆದಿಲ್ ಶಾಹಿಗಳ ಕೈವಶವಾಯಿತು, ತದನಂತರ ಮರಾಠರು, ಹೈದಲಿ ಹೀಗೆ ಬೇರೆ ಬೇರೆ ರಾಜರು, ಪಾಳೇಗಾರರ ಕೈವಶವಾಗುತ್ತ ಹೋಯಿತು, ಕೊನೆಯಲ್ಲಿ ಮಿರ್ಜಾನ್ ಕೋಟೆಯನ್ನ ಬ್ರಿಟಿಷರು ವಶಪಡಿಸಿಕೊಂಡರು. ವಾಸ್ತುಶಿಲ್ಪದ ಅಧ್ಯಯನದ ದ್ರಷ್ಟಿಯಿಂದಲೂ ಮಿರ್ಜಾನ್ ಕೋಟೆ ಮಹತ್ವದ್ದು. ಕೆಂಪು ಲೆಟರೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ,ಕೋಟೆಯ ವಿನ್ಯಾಸದಲ್ಲಿ ಇಸ್ಲಾಮೀಯ ಮತ್ತು ಪೋರ್ಚುಗೀಸರ ಪ್ರಭಾವವನ್ನು ಕಾಣಬಹುದು. ಒಳಬರಲು ಹಾಗು ಹೋಗಲು ಸುರಂಗ ಮಾರ್ಗಗಳಿವೆ. ಮಿರ್ಜಾನ್ ಹಿಂದೊಮ್ಮೆ ಬಂದರ್ ರಾಗಿತ್ತು. ಅರಬ್ ವ್ಯಾಪಾರಿಗಳು ಅಘನಾಶನಿ ನದಿಯ ಮೂಲಕ ಸಾಂಬಾರ ಪದಾರ್ಥಗಳನ್ನು,ಮುಖ್ಯವಾಗಿ ಮೆಣಸನ್ನು ರಫ್ತುಮಾಡಲು, ಕುದುರೆಗಳ ವ್ಯಾಪಾರಕ್ಕೆ ಇಲ್ಲಿ ವ್ಯವಹಾರ ಕೇಂದ್ರಗಳನ್ನು ಸ್ಥಾಪಿಸಿದ್ದರು .

Nice article about the fort. Had visited with my cousins last December and the atmosphere and aura of the place took us to the old times and we wondered who built this fort. Expecting more this kind of posts regarding the historical places of uttara Kannada.
ReplyDeleteNice one.worth a read.
ReplyDeleteThankz 😊
DeleteNICE,KEEP WRITING
ReplyDeleteThank u Dada😊
Delete