

ಯಕ್ಷಗಾನ ಕಲಾಪರಂಪರೆಯನ್ನು ಬೆಳಗಿಸಿದ ಹಲವು ಹವ್ಯಾಸಿ ಕಲಾವಿದರಲ್ಲಿ ಕುಮಟಾ ತಾಲೂಕಿನ ಪಡುವಣಿಯ ನಾರಾಯಣ ಅನಂತ ಗಾ೦ವಕಾರ ಅವರ ಹೆಸರು ಮಂಚೂಣಿಯಲ್ಲಿ ಬಂದು ನಿಲ್ಲುತ್ತದೆ . ಪಡುವಣಿಯ ಶ್ರೀಮತಿ ಸಣ್ಣಮ್ಮ ಹಾಗೂ ಅನಂತ ಗಾ೦ವಕಾರರ ಮಗನಾಗಿ ೧೯೪೦ರ ಮೇ ೧೦ ರಂದು ಜನಿಸಿದ ನೀವು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗಡೆಯಲ್ಲಿ ಪಡೆದು, ಯಕ್ಷಗಾನದತ್ತ ಆಕರ್ಷಿತರಾಗಿ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಅಭಿಮನ್ಯುವಿನ ಪಾತ್ರದ ಮೂಲಕ ಗೆಜ್ಜೆಕಟ್ಟಿ ರಂಗಕ್ಕೆ ಹೆಜ್ಜೆ ಹಾಕಿದವರು . ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಹಾಗೂ ಪಡುವಣಿಯ ಪರಮಯ್ಯಾ ಪಟಗಾರರನ್ನು ತಮ್ಮ ಯಕ್ಷಗುರುಗಳೆಂದು ಒಪ್ಪಿಕೊಳ್ಳುವ ನೀವು ಎಲ್ಲಾ ಬಗೆಯ ಪಾತ್ರಗಳ್ಳನ್ನು ಮಾಡಲಾರಂಭಿಸಿದವರು . "ಕಚದೇವಿಯಾನಿ "ಯ ಶುಕ್ರಾಚಾರ್ಯ , ಮಾರುತಿ ಪ್ರತಾಪದ ಹನುಮಂತನಾಗಿ ಪ್ರಸಿದ್ಧರಾಗಿ , ಇಂದ್ರಜಿತು ಕಾಳಗದಲ್ಲಿ ಮುರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹಲವಾರು ಬಾರಿ ಪಾತ್ರ ನಿರ್ವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯ ಆಯಾಮ ಒದಗಿಸಿದವರು . ಹನುಮಂತನ ಪಾತ್ರವನ್ನು ನಿರ್ವಹಿಸಿದ ನೀವು ಬಡಗುತಿಟ್ಟಿನ ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಠ ಹನುಮಂತನ ಪಾತ್ರಧಾರಿಗಳ ಸಾಲಿನಲ್ಲಿ ನಿಲ್ಲುವವರು . " ಭೂ ಕೈಲಾಸ " ದಲ್ಲಿ ಎಕ್ವರ್ ಜೋಶಿಯವರ ರಾವಣ ಪಾತ್ರದ ಎದುರು ನೀವು ಈಶ್ವರನಾಗಿ ಅಭಿನಯಿಸಿ ,ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದವರು . ನಿಮ್ಮ ಈ ಜೋಡಿಯ ಜನಪ್ರಿಯತೆಗೆ ಮುಂಬೈ ಮತ್ತು ಗೋವಾದಲ್ಲಿಯೂ ಆಹ್ವಾನಿಸಿ ಪ್ರದರ್ಶನ ಏರ್ಪಡಿಸಿರುವುದು ಅಸ್ಮರಣೀಯವಾಗಿದೆ . ಕೆರೆಮನೆ ಮಹಾಬಲ ಹೆಗಡೆಯವರ ಸುಧನ್ವನ ಎದುರು ಅರ್ಜುನನಾಗಿ ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರದ ಎದುರು ಈಶ್ವರನಾಗಿ ಹೀಗೆ ಪ್ರಸಿದ್ಧ ಕಲಾವಿದರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡವರು .

Nice.keep posting
ReplyDeleteThank you😊
Delete